ಚಿಕ್ಕಬಳ್ಳಾಪುರ ಡಿಸೆಂಬರ್ ೦೨ ; ಬೈಪಾಸ್ ಆರಂಭವಾಗುವ ಜಿಲ್ಲಾಧಿಕಾರಿಗಳ ಕಛೇರಿ ಬಳಿಯಿಂದ ಮುಕ್ತಾಯಗೊಳ್ಳುವ ವಾಪಸಂದ್ರದ ವರೆಗಿನ ರಾಷ್ಠ್ರೀಯ ಹೆದ್ದಾರಿ ಏಳು ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವ ಕಾಮಗಾರಿಗೆ ಕ್ಷೇತ್ರದ ಶಾಸಕ ಕೆ.ಪಿ.ಬಚ್ಚೇಗೌಡ ಚಾಲನೆ ನೀಡಿದರು.
ಸುಮಾರು ಏಳು ಕಿಮೀ ರಸ್ತೆಯನ್ನು ಹೊಂದಿರುವ ನಗರದ ಮಧ್ಯಭಾಗದಿಂದ ಹಾದು ಹೋಗುವ ರಾಷ್ಠ್ರೀಯ ಹೆದ್ದಾರಿ ೭ರಲ್ಲಿ ಡಾಂಬರು ಹಾಕಿ ರಸ್ತೆಯಲ್ಲಿ ವಿಭಜಕಗಳನ್ನು ಅಳವಡಿಸಿ ರಸ್ತೆಯನ್ನು ಸುಸ್ತಿಯಲ್ಲಿಟ್ಟುಕೊಡುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾಮಗಾರಿಯಿಂದಾಗಿ ರಸ್ತೆಯನ್ನು ೧೪ ರಿಂದ೧೮ ಮೀಟರ್ ಗಳವರೆಗೆ ಅಭಿವೃದ್ದಿಪಡಿಸುತ್ತಿರುವುದಾಗಿಯೂ ಇದರಿಂದ ರಸ್ತೆಯ ಇಕ್ಕೆಲೆಗಳಲ್ಲಿರುವ ಕಟ್ಟಡಗಳಿಗೆ ಯಾವುದೇ ಹಾನಿಯಾಗುವ ಸಂಭಂವಗಳಿಲ್ಲವೆಂದು ಟೆಂಡರನ್ನು ಪಡೆದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಮಗಾರಿಯ ನಂತರ ಶನಿ ಮಹಾತ್ಮ ದೇವಸ್ಥಾನದಿಂದ ವಾಪಸಂದ್ರದವರೆವಿಗೆ ರಸ್ತೆ ಮಧ್ಯಭಾಗದಲ್ಲಿ ಸೊಡಿಯಂ ದೀಪಗಳನ್ನು ಅಳವಡಿಸುವುದಾಗಿ ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನ್ವರ್ ಪಾಷಾ, ನಗರ ಸಭಾ ಅಧ್ಯಕ್ಷ ಎಂ.ಪ್ರಕಾಶ್,ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಆರ್.ನಾರಾಯಣ ಸ್ವಾಮಿ, ತಹಸಿಲ್ದಾರ್ ನಾಗರಾಜ್, ಪೌರಾಯುಕ್ತ ಉಮಾಕಾಂತ್, ವೃತ್ತ ನಿರೀಕ್ಷಕ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.